ಸೋಮವಾರ, ಮಾರ್ಚ್ 9, 2009

ನನ್ನ ಅಮ್ಮ


ನನ್ನ ಅಮ್ಮನೂ .. ಸುಂದರಿ
ತೊಳೆದ ಮುತ್ತಿನ ಲಹರಿ
ಒಂದು ಕಾಲದಲ್ಲಿ...!!!

ಮುದ್ದುಕ್ಕುವ ಹಾಲ್ಗೆನ್ನೆ
ಮುಗ್ಧತೆ ಸೂಸುವ ಚಿಹ್ನೆ
ಹಳೇ ಭಾವ ಚಿತ್ರದಲ್ಲಿ...!!!

ನನ್ನಮ್ಮ ಒಲವಿನಿಂದ
ಕನಸುಗಳ ಲೋಕದಿಂದ
ಧುಮುಕಿದ್ದು ಸಂಸಾರ ಕೂಪದಲ್ಲಿ...!!!

ಕಟ್ಟಿದ ಕನಸುಗಳ ಬುತ್ತಿ
ಒತ್ತೊಟ್ಟಿಗಿಟ್ಟು , ಟೊಂಕ ಕಟ್ಟಿ,
ನಿಂತಿದ್ದು ಸಂಸಾರದ ದಾಳದಲ್ಲಿ...!!!

ಕಷ್ಟ ಕೋಟಲೆಗಳ ಜಂಜಾಟದಲ್ಲಿ
ನೊಂದು ನಲುಗಿ ಬಾಳಿನಲ್ಲಿ
ಈಗ ಒಣ ಹೂವಿನ ಮಲ್ಲಿ...!!!

ನೆರಿ ಬಿದ್ದ ಹಣೆ , ಮಾಸಿದ ಯೌವ್ವನ
ಗುಳಿಬಿದ್ದ ಕಣ್ಣು, ಸುಣ್ಣದ ಮೈ..
ಬದಲಾಗದ ವಾತ್ಸಲ್ಯದ ಮನ
ಈ ಬದಲಾದ ಕಾಲ ಚಕ್ರದಲ್ಲಿ...!!!

7 ಕಾಮೆಂಟ್‌ಗಳು:

 1. ಕ್ರಪಾಕ್ಕ
  ತುಂಬಾ ಚೆನ್ನಾಗಿ ನಿಮ್ಮ ತಾಯಿನ ವರ್ಣಿಸಿದ್ದೀರ
  ಕಟ್ಟಿದ ಕನಸುಗಳ ಬುತ್ತಿ
  ಒತ್ತೊಟ್ಟಿಗಿಟ್ಟು , ಟೊಂಕ ಕಟ್ಟಿ,
  ನಿಂತಿದ್ದು ಸಂಸಾರದ ದಾಳದಲ್ಲಿ
  ಈ ಪ್ಯಾರ ಸಖತ್ ಇಷ್ಟ ಆಯಿತು ಅಕ್ಕ

  ಪ್ರತ್ಯುತ್ತರಅಳಿಸಿ
 2. ಕ್ರ್‍ಅಪಾ...

  ನನ್ನಮ್ಮನ ನೆನಪು ತರಿಸಿ ಬಿಟ್ಟಿರಲ್ಲ...

  ಅಮ್ಮ ಎನ್ನುವ ಪದವೇ ಹಾಗೆ...

  ನಿಮ್ಮ (ಹೆಂಗಸರು) ಬಗೆಗೆ ನನಗೆ ಮತ್ಸರ ಇದೆ..

  ನಿಮ್ಮಂತೆ, ತಾಯಿಯಾಗಿ...
  ಮಮತೆ, ಪ್ರೀತಿಯನ್ನು ನಮಗೆ ಕೊಡಲಾಗದಿಲ್ಲವಲ್ಲ..
  ತಾಯಿಯ ಹಾಗೆ ಪ್ರೀತಿಸಲಾಗುವದಿಲವಲ್ಲ...

  ತುಂಬಾ ಸುಂದರ ಕವನ..
  ಅಂದದ ಪದಗಳಲ್ಲಿ..

  ಭಾವ, ಭಾವಾರ್ಥವನ್ನು..
  ಬಿಂಬಿಬಿಸಿದ್ದೀರಿ..

  ಅಭಿನಂದನೆಗಳನ್ನು

  "ಶಿವು" ಗೆ ಹೇಳುವೆ...

  ಪ್ರತ್ಯುತ್ತರಅಳಿಸಿ
 3. ಕೃಪಾ ಮೇಡಂ,
  ಅಮ್ಮನ ಬಗ್ಗೆ ಏನು ಬರೆದರು, ಹೇಗೆ ಬರೆದರು ಚೆಂದವಂತೆ... ನೀವು ಇನ್ನೊಂದು ಹಿಡಿಯಷ್ಟು ಹೆಚ್ಚು ಪ್ರೀತಿ ಬೆರೆಸಿ ಬರೆದು, ಇನ್ನೂ ಆಪ್ತವಾಗಿಸಿದ್ದೀರಿ. ಸೊಗಸಾಗಿದೆ ಕವನ.

  ಪ್ರತ್ಯುತ್ತರಅಳಿಸಿ
 4. ಕ್ರುಪಾ ಅಕ್ಕ,

  ಅಮ್ಮನ ಬಗ್ಗೆ ಒಂದು ಸೊಗಸಾದ ಕವನ...

  ಒಂದೆರಡು ಪದಗಳನ್ನು ಮಾತ್ರ ಜೋಡಿಸಿ ಹೆಚ್ಚು ಭಾವಪೂರ್ಣವಾಗಿಸುವುದು..ಒಂದು ಅದ್ಬುತ ಕತೆ...ಈ ರೀತಿ ನಮ್ಮ ಬ್ಲಾಗಿಗರನೇಕರು ಬರೆಯುತ್ತಾರೆ...ಅವರ ಸಾಲಿನಲ್ಲಿ ನೀವು ಸೇರಿದಿರಿ...ನಾನು ಈ ರೀತಿ ಪ್ರಯತ್ನಿಸುತ್ತಿದ್ದೇನೆ...ಆಗುತ್ತಲೇ ಇಲ್ಲ...
  ನೀವು ಎರಡನೇ ಕವನದಲ್ಲೇ ಸಾಧಿಸಿದ್ದೀರಿ...ಅಭಿನಂದನೆಗಳು..

  ನನ್ನ ಅಮ್ಮನೂ .. ಸುಂದರಿ
  ತೊಳೆದ ಮುತ್ತಿನ ಲಹರಿ
  ಒಂದು ಕಾಲದಲ್ಲಿ...!!!

  ಮುದ್ದುಕ್ಕುವ ಹಾಲ್ಗೆನ್ನೆ
  ಮುಗ್ಧತೆ ಸೂಸುವ ಚಿಹ್ನೆ
  ಹಳೇ ಭಾವ ಚಿತ್ರದಲ್ಲಿ...!!!

  ಈ ಪದ್ಯಗಳು ನನಗೆ ತುಂಬಾ ಇಷ್ಟವಾಯಿತು....

  [ಮತ್ತೆ ತೊಳೆದ ಮುತ್ತಿನ ಸುಂದರಿ, ಮುದ್ದುಕ್ಕುವ ಹಾಲ್ಗೆನ್ನೆ,
  ಮುಗ್ಧತೆ ಸೂಸುವ ಚಿಹ್ನೆ., ಈ ಪದಗಳೆಲ್ಲಾ ಎಲ್ಲಿ ಸಿಕ್ಕಿತು ನಿಮಗೆ ನಮಗೂ ಸಾಲಕೊಡಿ....]

  ಪ್ರತ್ಯುತ್ತರಅಳಿಸಿ
 5. ಕೃಪಾ ಅವರೇ,
  ಶಿವೂ ಹೇಳಿದ ನ೦ತರ ನಿಮ್ಮ ಬ್ಲಾಗಿನ ಬಗ್ಗೆ ನನಗೆ ತಿಳಿಯಿತು.ಬ೦ದೆ, ನೋಡಿದರೆ ಉತ್ತಮವಾದೊ೦ದು ಕವನ ದ ಓದು ಪ್ರಾಪ್ತವಾಯಿತು.ಚೆನ್ನಾಗಿದೆ. ಮು೦ದುವರಿಸಿ. ನನ್ನ ಬ್ಲಾಗಿಗೂ ಒಮ್ಮೆ ಬ೦ದು ಓದಿ ಅಭಿಪ್ರಾಯಿಸಿ.
  www.nirpars.blogspot.com

  ಪ್ರತ್ಯುತ್ತರಅಳಿಸಿ
 6. ಅಮ್ಮ ಹೇಗಿದ್ದರೂ ಚೆನ್ನ. ಅಮ್ಮನ ಬಗ್ಗೆ ಏನು ಬರೆದರೂ ಚೆನ್ನ.
  ತುಂಬ ಚೆನ್ನಾಗಿದೆ.
  ಚಿಟ್ಟೆ ಹುಟ್ಟಿದೆ ನೋಡ್ಲಿಲ್ವಾ? ನನ್ನ ಬ್ಲಾಗಿಗೆ ಬನ್ನಿ.

  ಪ್ರತ್ಯುತ್ತರಅಳಿಸಿ
 7. ಹಾಯ್... ರೋಹಿಣಿ.....
  ನನ್ನಮ್ಮ ನಿನಗೆ.... ಖುಷಿ.... ತಂತಲ್ಲ.....
  ನನಗದೆ.... ಖುಷಿ....
  ಧನ್ಯವಾದಗಳು....

  ನಮಸ್ತೆ...... ಪ್ರಕಾಶ್ ಅವರೇ......
  ಅಮ್ಮನ ಹೆಣ್ಣು ಮಕ್ಕಳಿಗಿಂತ..... ನೀವು ಗಂಡು ಮಕ್ಕಳೇ...... ಸುಲಭವಾಗಿ ಅರ್ಥೈಸಿಕೊಂಡಿರುತ್ತೀರಿ.....
  ನಾನು ಅಮ್ಮ ಆದ ನಂತರವೇ..... ನನಗೆ ಅಮ್ಮನ ಅಂತರಾಳ ಗೊತ್ತಾಗಿದ್ದು.....
  ಧನ್ಯವಾದಗಳು.... ಸರ್....

  ನಮಸ್ತೆ.... ರಾಜೇಶ್......
  ನಿಜಾರೀ ಅಮ್ಮನ ಬಗ್ಗೆ ಏನೂ ಬರೆದರೂ ಕಡಿಮೆಯೇ....
  ನಿಮಗೆಲ್ಲ ತುಂಬು... ಧನ್ಯವಾದಗಳು.....

  ನಮಸ್ತೆ.... ಶಿವಣ್ಣ.....
  ನಿಮ್ಮ ಹೊಗಳಿಕೆ ಜಾಸ್ತಿ ಆಯ್ತು.....
  ನಿಮ್ಮ ಶಿಷ್ಯೆ.... ನಾನು.....
  ಅಂತು.... ಬೆನ್ನು ತಟ್ಟುವ ಅದೆಷ್ಟು ಕೈಗಳು.... ನನಗಿವೆಯಲ್ಲ
  ಸಂತೂಷವಾಗ್ತಿದೆ....

  ನಮಸ್ತೆ... ಪರಾಂಜಪೆ ಸರ್....
  ನನ್ನ ಬ್ಲ್ಲಗ್ ಗೆ ಸ್ವಾಗತ....
  ನಿಮ್ಮೆಲ್ಲರ ಮೆಚ್ಚುಗೆ.... ನನಗೆ ಪ್ರೋತ್ಸಾಹ.....

  ನಮಸ್ತೆ.... ಮಲ್ಲಿ ಸರ್.....
  ಧನ್ಯವಾದಗಳು.....
  ಖಂಡಿತ.... ನಿಮ್ಮ ಬ್ಲಾಗ್ ಗೆ ಬರುವೆ....

  ಪ್ರತ್ಯುತ್ತರಅಳಿಸಿ