ಶುಕ್ರವಾರ, ಮಾರ್ಚ್ 6, 2009

ಜನನ

ತಾಯಿಯ ಗರ್ಭದಲ್ಲಿ...
ಮಗು ಪ್ರಥಮವಾಗಿ ಚಲಿಸಿದಂತೆ...
ಅತ್ತ-ಇತ್ತ ತೊನೆದಾಡಿ ಗುದ್ದಿದಂತೆ...
ನನ್ನಾಳದಲೀ ನಲಿಯುತ್ತಿತ್ತೊಂದು ಭಾವ;

ಕೊನೆಗೂ, ಹೃದಯ ಗರ್ಭದಲ್ಲಿ
ಕೊನರಿತೊಂದು ಪುಟ್ಟ ಕವಿತೆ
ಮಾತೆಯ ಮಮತೆಯೊಡಲಲ್ಲಿ
ಕುಡಿಯೊಂದು ಪಲ್ಲವಿಸಿದಂತೆ...

ವೈದ್ಯೆ ನೀಡಿದಳು ಸಲಹೆ
ಗೆಳತಿ ಹತ್ತು ಹಲವು ರೀತಿಯಲಿ
ಕರುಳ ಕುಡಿಯ ಭವಿಷ್ಯಕ್ಕೆ
ಬಾಳಿ ಬೆಳಗಲು ಮುಂದಕ್ಕೆ ....

ಕಣ್ಣು ತೆರೆಯುವ ಮೊದಲೇ
ಜಗಕ್ಕೆ ಬರುವ ಮುಂಚೆಯೇ
ಸಕಲ ರಾಸಾಯನಿಕಗಳ ಪಾನ
ಕೇಳಿಸಲಿಲ್ಲೆನಗೆ ಎಳೆಕಂದನ ರೋದನ ...

ಅಂತೂ ಕೊನೆಗೊಂದು ದಿನ
ರೂಪ ತಾಳಿತೊಂದು ಕವನ
ನವ ಶಿಶುವಿನ ಜನನ
ಅಯ್ಯೋ ಮಗು ಅಂಗಹೀನ ...!

ಬೆಳೆಯಬಿಟ್ಟಿದ್ದಾರೆ ಸ್ವೆಚೆಯಲಿ
ಇರುತ್ತಿತ್ತೆನೋ ಶಿಶು ಆರೋಗ್ಯದಲ್ಲಿ
ಹರಿಯ ಬಿಟ್ಟಿದ್ದರೆ ಸ್ವಂತ ಲಹರಿಯಲಿ...
ಮೂಡುತ್ತಿತ್ತೇನೋ ಕವನ ಅಂದದಲೀ......

8 ಕಾಮೆಂಟ್‌ಗಳು:

  1. ಕೃಪಾ ಅಕ್ಕ,

    ಥಾಮಸ್ ಆಳ್ವಾ ಎಡಿಸನ್ ಉದಾಹರಣೆ ಕೊಟ್ಟಿದ್ದಕ್ಕೆ ಸಾರ್ಥಕವಾಯಿತು..
    ಕವನ ನಿಜಕ್ಕೂ ಸೊಗಸಾಗಿದೆ..ಮಮತೆ ವಾತ್ಸಲ್ಯದ ಚೌಕಟ್ಟಿನಲ್ಲಿ...ಸರಳವಾಗಿ ಸುಂದರವಾಗಿ ಮೂಡಿ ಬಂದಿದೆ...

    ಮುಂದಿನ ಬರಹಕ್ಕಾಗಿ ಕಾಯುತ್ತಿರುತ್ತೇನೆ...

    ಪ್ರತ್ಯುತ್ತರಅಳಿಸಿ
  2. ನಮಸ್ತೆ ಶಿವಣ್ಣ ...

    ನಿಮಗೆ ಧನ್ಯವಾದಗಳನ್ನು ಹೇಗೆ ತಿಳಿಸಿದರು....ಕಡಿಮೆ ಆದೀತೇನೋ.......

    ನಿಮ್ಮ ಪ್ರೋತ್ಸಾಹದಾಯಕ ಮಾತುಗಳು ಇಲ್ಲದಿದ್ದರೆ....

    ಖಂಡಿತವಾಗಿಯೂ ನಾನು ಹೆಜ್ಜೆ ಮುಂದೆ ಇಡುತ್ತಿರಲಿಲ್ಲ..

    ಕವನವನ್ನೂ ಮೆಚ್ಚಿದ್ದೀರಲ್ಲ.... ನಿಮ್ಮ ಮೆಚ್ಚುಗೆಯನ್ನ ತುಂಬು ಮನದಿಂದ ಸ್ವೀಕರಿಸುತ್ತಾ ಇದ್ದೇನೆ....

    ಯಾಕೆಂದರೆ ಅದು ನನ್ನ ಕೂಸು ಅಲ್ಲವೇ..? (ಹೆತ್ತವರಿಗೆ ಹೆಗ್ಗಣ ಮುದ್ದಂತೆ...)

    ಪ್ರತ್ಯುತ್ತರಅಳಿಸಿ
  3. ಕ್ರಪಾ ಅಕ್ಕ

    ಶಿವು ಅಣ್ಣ ನಿಮ್ಮ ಬ್ಲಾಗ್ ಬಗ್ಗೆ ಹೇಳಿದರು
    ನಿಜವಾಗಿಯು ಒಳ್ಳೆ ಕವನ
    ಕಣ್ಣು ತೆರೆಯುವ ಮೊದಲೇ
    ಜಗಕ್ಕೆ ಬರುವ ಮುಂಚೆಯೇ
    ಸಕಲ ರಾಸಾಯನಿಕಗಳ ಪಾನ
    ಕೇಳಿಸಲಿಲ್ಲೆನಗೆ ಎಳೆಕಂದನ ರೋದನ ...

    ಈ ಪ್ಯಾರ ಅಂತು ತುಂಬಾ ಹಿಡಿಸಿತು ನಿಮ್ಮ ಪಯಣವನ್ನು ಹೀಗೆ ಮುಂದುವರಿಸಿ

    ಪ್ರತ್ಯುತ್ತರಅಳಿಸಿ
  4. ಕ್ರಪಾರವರೆ..

    ಸುಂದರ ಶಬ್ಧಗಳಲ್ಲಿ...
    ಭಾವನೆಗಳನ್ನು..

    ಭಾವಗಳನ್ನು ವ್ಯಕ್ತ ಪಡಿಸುವದು..
    ಬಹಳ ಕಷ್ಟ...

    ನೀವು ಗೆದ್ದಿದ್ದೀರಿ...
    ನೀವು ಬರೆಯ ಬಲ್ಲೀರಿ...

    ಮಗುವಿನ ಭಾವನೆಯನ್ನು ಸಮರ್ಥವಾಗಿ ಬಿಂಬಿಸಿದ್ದೀರಿ...

    ಅಭಿನಂದನೆಗಳು...

    ನಿಮ್ಮನ್ನು ಅನುಸರಿಸುವ ಅವಕಾಶವನ್ನು..

    ಬ್ಲಾಗಿನಲ್ಲಿ ದಯವಿಟ್ಟು ಇಡಿ...

    ಪ್ರತ್ಯುತ್ತರಅಳಿಸಿ
  5. ಚಂದದ ಕವನ. ಕವನ(ಕೂಸು) ಈಗಲೂ ತುಂಬಾ ಚೆನ್ನಾಗಿದೆ. ಇನ್ನೂ ಚೆನ್ನಾಗಿದ್ದಿದ್ದ್ರೆ.. ಎಂಬ ಭಾವ ಬೆಳವಣಿಗೆಯ ಲಕ್ಷಣ.
    ಕೊಡಗು ಸುಂದರವಾದ ಜಿಲ್ಲೆ. ವೀರರ ನಾಡು. ನಮಗೆಲ್ಲಾ ನಿಮ್ಮ ಊರು, ನಾಡನ್ನು ಪರಿಚಯಿಸಿ. ನನ್ನ ಆತ್ಮೀಯ ಸ್ನೇಹಿತ ಕೊಡಗಿನವನು. ಆದರೀಗವನು ವಿದೇಶದಲ್ಲಿದ್ದಾನೆ.
    ನೀವೂ ಪ್ರಕಾಶ್ ಹೆಗಡೆ ತರಹ ನನಗೆ ಬರೆಯಲು ಬರಲ್ಲ ಅಂತ ಹೇಳುತ್ತಲೇ ಸಕತ್ತಾಗಿ ಬರೀತೀರ. All the Best.

    ಪ್ರತ್ಯುತ್ತರಅಳಿಸಿ
  6. ಹಾಯ್ ರೋಹಿಣಿ...

    ನಂಗೂ ತಂಗಿ ಇಲ್ಲಾರೀ...

    ನೀವು ಅಕ್ಕ ಅಂದಿದ್ದಕ್ಕೆ....

    ಹಾಗು... ಪಯಣದ ಮುಂದುವರೆಸಿ ಎಂದು ಹಾರೈಸಿದ್ದಕ್ಕೆ....

    ಧನ್ಯವಾದಗಳು....

    ಪ್ರತ್ಯುತ್ತರಅಳಿಸಿ
  7. ನಮಸ್ತೆ...ಪ್ರಕಾಶ್ ಹೆಗಡೆ ಅವರೇ.....

    ನೀವು ಬಂದು ಕಾಮೆಂಟ್ ಮಾಡ್ತೀರ... ಎಂದು ಅಂದು ಕೊಂಡೆ ಇರಲಿಲ್ಲ...

    ನಿಮ್ಮ ಇಟ್ಟಿಗೆ ಸಿಮೆಂಟ್ ಅಭಿಮಾನಿರೀ.... ನಾನು...

    ತುಂಬು ಧನ್ಯವಾದಗಳು......

    ಪ್ರತ್ಯುತ್ತರಅಳಿಸಿ
  8. ಮಲ್ಲಿ ಅಣ್ಣ...

    ಮೆಚ್ಚಿ ಬೆನ್ನು ತಟ್ಟುವ ಕೆಲಸ ಮಾಡ್ತಿದ್ದೀರಾ .... ನೀವೆಲ್ಲ....

    ನನ್ನ ಕೂಸನ್ನು ಇಷ್ಟ ಪಟ್ಟಿದಕ್ಕೆ......

    ತು೦೦೦೦೦೦೦೦೦೦೦ ಬಾ ಥಾಂಕ್ಸ್

    ನಂಗೊತ್ತು.... ನಿಮಗೆಲ್ಲ ಶಿವಣ್ಣನೆ ....... ತಿಳಿಸಿದ್ದು ....

    ಅವರಿಗೂ ಅನಂತ....ಅನಂತ.... ಧನ್ಯವಾದಗಳು...

    ಪ್ರತ್ಯುತ್ತರಅಳಿಸಿ